Thursday, August 16, 2012

ಬಚ್ಚಿಟ್ಟ ಹಂಬಲಗಳು ಬೆನ್ನಟ್ಟಿವೆ
ತೆರೆಬಾರದ ತೀರದಲ್ಲಿ ಮೂಡಿದ ಹೆಜ್ಜೆ ಗುರುತೊಂದು
ಮಾಯವಾಗಿದೆ ತಂತಾನೆ
ತಿಳಿದೋ ತಿಳಿಯದೆಯೋ ನಾನು ಸಮಾಧಿಯಾಗಿದ್ದೇನೆ
ಕಳೆದುಹೋದ ಹೆಜ್ಜೆಗಳ ಹುಡುಕಾಟದಲ್ಲಿ
ಬೆಂಕಿ ತಗುಲಿದ ಭಾವನೆಯ ಗೊಂಚಲಿಗೆ
ನೀರ ಚಿಮುಕಿಸುವ ತೃಣ ಪ್ರಯತ್ನ ನನ್ನದು
ಗೆಜ್ಜೆನಾದದ ಹೆಜ್ಜೆಗಧುಡುಕಾಟದಲ್ಲಿ ನಾನು.................

Wednesday, August 8, 2012

ಮೊಹಬತ್ತಿನ ಗುಲ್ಮೊಹರ್ ಅರಳುವ ಸಮಯ
ಬಾಡಿಹೋದ ಮನ ನಳನಳಿಸುವ ಸಮಯ
ದಾರಿ ಬದಿಯ ಗುಲ್ಮೊಹರ್ ಕೇಳುತ್ತಿದೆ
ಏನಾಗಿದೆ ನಿನಗಿಂದು
ನನಗೂ ನಿಜವೆನಿಸಿದೆ ಅದರ ಮಾತೇ
ಗುಲ್ಲುಗುಲ್ಲಾಗಿರೊ ನನ್ನ ಮನಸೊಳು ಗುಲ್ಮೊಹರ್ ಹೂ
ಅರಳೀತೇ

Friday, August 3, 2012

ಕನಸುಗಳ ಲೊಕದಲ್ಲಿ ವಿಹರಿಸುತ್ತ
ನಕ್ಷತ್ರಗಳೊಂದಿಗೆ ನಲುಗುತ್ತ
ಚಂದಿರನೊಂದಿಗೆ ಹರಟುತ್ತ
ಸಾಗೋಣ ಬಾ ದೂರ ದೂರ
ಕನಸುಗಳಿಗೆ ಕಾವಲಿರು ನೀನು
ದೋಚಬಹುದು ಯಾರಾದರೂ
ಕನಸೆಂದರೆ ಕೇವಲ ಕನಸುಗಳಲ್ಲ
ಸುಪ್ತಮನಸಿನ ಭಾವಗಳು
ಮೂಕಮನದ ನೂರು ರಾಗಗಳು
ಕಲ್ಪನೆಯ ಕಾವ್ಯ ಕುಸುಮಗಳವು ಜೋಪಾನ

Friday, July 20, 2012

ಬರೆದೆ ನೀನು ನಿನ್ನ ಹೆಸರ ನನ್ನ ಕನಸು ಮನಸಲೂ
ನಿನ್ನ ಒಲವ ವರ್ಷಧಾರೆ ನನ್ನ ಮನವ ತಣಿಸಿದೆ
ನಿನ್ನ ಪ್ರೇಮ ನಾದದಿಂದ ಹೃದಯ ತಂತಿ ಮೀಟಿದೆ
ನಿನ್ನೆಲ್ಲ ಕನಸು ನನ್ನದಾಗಿದೆ
ನನ್ನೆಲ್ಲ ಕಲ್ಪನೆ ನಿನದಾಗಿದೆ
ಭೂಮಿಗೆ ರವಿಯಂತೆ ನೀ ನನಗೆ
ಬಾ ಒಮ್ಮೆ ಬಂದು ಸೇರೆನ್ನ ಹೃದಯಸಾಮ್ರಜ್ಯವನು

Monday, July 16, 2012


ಅನಿಸುತಿದೆ ಮನಕಿಂದು ಒಬ್ಬಂಟ್ಟಿಯೆಂದು
ಹೇಗೆ ಸಮಾಧಾನಿಸಲಿ ನಾನಿಲ್ಲಿ
ನೀ ಒಬ್ಬಂಟ್ಟಿಯಲ್ಲವೆಂದು
ಪರಿಪರಿಯಾಗಿ ಪ್ರಯತ್ನಿಸಿ ಸೋತಿರುವೆ ನಾನು
ಅದೆಂದು ದೊರತೀತು ಸಮಾಧಾನ
ಕಾದಿರುವೆ ನಾನು  ಚಾತಕ ಪಕ್ಶಿಯಂತೆ
ರಾಮನಿಗೆ ಕಾದಿರುವ ಶಬರಿಯಂತೆ
ಅಂದು ಕಾದಳು ಶಬರಿ ರಾಮನಿಗಾಗಿ,
ಇಂದು ನಾ ಕಾದಿರುವೆ ನೆಮ್ಮದಿಗಾಗಿ
ನಾನು ಶಬರಿಯೇ
ವ್ಯತ್ಯಸವೇನಿಲ್ಲ ನನಗೂ,ಆಕೆಗೂ
ಆಕೆ ಶಬರಿ, ನಾನು..................

Friday, June 8, 2012

ಮುಸ್ಸಂಜೆಯ ರಾಗಕೆ ಮಳೆಹನಿ ತಾಳವಾಗಿದೆ ಚಿಟ ಪಟ ಸದ್ದು ಎಲ್ಲೆಲ್ಲೂ ತುಂತುರು ಹನಿಗಳ ಶ್ರುತಿಲಯಕೆ ಮನವು ಹಾರಾಡಿದೆ ಹಕ್ಕಿಯಂತೆ ಎಂದೊ ಮರೆತ ಹಾಡು ನೆನಪಾಗಿದೆ ಹೃದಯದಲ್ಲಿ ನೂರಾರು ರಾಗಗಳು ಒಮ್ಮೆಲೆ ತಕಧಿಮಿ ಧಿಮಿಕಿಟ ನೃತ್ಯಕೆ ಹೆಜ್ಜೆಹಾಕಿವೆ ಎದೆಯಲ್ಲೊಂದು ಸರಿಗಮ ಲಹರಿ ಸುಳಿದಿದೆ ತಂತಾನೆ

Thursday, May 24, 2012

ಮನದ ಮುಗಿಲಲಿ ಪ್ರೀತಿ ಮಳೆಹನಿ ಚಿಮ್ಮಿಸಿ ಸಾವಿರ ಕನಸುಗಳಿಗೆ ನೀರೆರೆದ ನನ್ನ ಪ್ರೀತಿಯ ಹುಡುಗ ನಿನ್ನೊಲವೇ ಸಾಕು ನೂರೂ ಜನುಮಕೂ ಆದರೂ ಒಬ್ಬಂಟಿ ನಾನಿಲ್ಲಿ ಒಂದಿನಿತು ಸುಮ್ಮನಿರಲಾರೆ ನಿನ್ನ ನೆನಪಾಗದೆ ನಿನಗೆಂದೇ ನೂರಾರು ಓಲೆ ಗೀಚಿ ಮನದಲ್ಲೇ ಪುಸ್ತಕವೊಂದ ಛಾಪಿಸಿರುವೆ ಓದಿ ಅಭಿಪ್ರಾಯ ತಿಳಿಸು ಗೆಳೆಯಾ...

Friday, April 20, 2012

ಮಾತು ಕೇಳದ ಮನಸು
ಕನಸು ಕಾಣುವ ವಯಸು
ಮೂಡಿರಲು ಮನದಲ್ಲಿ ಹೊಸತು ಚಿತ್ತಾರ
ಬಣ್ಣಗಳ ಒಕುಳಿಯಲಿ ಮನವು ನಲಿದಾಡಿ
ಒಲವ ವರ್ಷಧಾರೆಯಲಿ ಮಿಂದು ತೊಯ್ದಿದೆ
ಪನ್ನೀರ ಅಮೃತದ ಕಲಶವ ಹೊತ್ತು ಅವನ ದಾರಿ ಕಾದಿದೆ
ಸ್ವಾಗತಿಸಲು ಮನಸಾರೆ

Friday, March 9, 2012

ಮನಸು ಮಾತಾಡಿದೆ ತಂತಾನೆ
ನನಗೂ ಅರ್ಥವಾಗದ ಮಾತದು
ಅದಾವ ಶಬ್ಧಗಳೋ ತಿಳಿಯುತಿಲ್ಲ
ಅದಾವ ಭಾಷೆಯೋ ತಿಳಿಯುತಿಲ್ಲ
ಅರ್ಥಮಾಡಿಸುವೆಯಾ ಗೆಳೆಯಾ
ಮನಸಿಗೂ ನೀನೇ ಬೇಕಂತೆ
ನಿನ್ನ ಒಡನಾಟ ಬೇಕಂತೆ
ನಿನ್ನ ಕೈ ಹಿಡಿದು ಜೊತೆಸಾಗಬೇಕಂತೆ
ಬರುವೆಯಾ ಜೊತೆಸಾಗುವೆಯಾ

Monday, February 27, 2012

ಹೊಸ ಚೈತನ್ಯ ಮೂಡಿದೆ ಮನಸಲ್ಲಿ
ನಸುನಗು ಮೂಡಿದೆ ಮೊಗದಲ್ಲಿ
ಕಣ್ಣಿಗೆ ಕನಸಕಾಣುವುದೊಂದೇ ಕೆಲಸ
ಬೇರೇನೂ ತೋಚುತಿಲ್ಲ ಮನಕೆ
ನನ್ನ ಮನಸು ನನ್ನೊಳಿಲ್ಲ
ಎಂದೊ ಕೇಳಿದ ಹಾಡಿಗೆ ಈಗ ತಾಳ ಹಾಕುತ್ತಿರುವೆ
ನನ್ನವನ ದನಿಯೇ ಹಿಮ್ಮೇಳ
ಅವನುಸಿರೇ ಸಂಗೀತ
ನಮ್ಮೊಲವೇ ನೂತನ ಪ್ರೇಮ ಕಾವ್ಯ
ಇದಕೆ ಬೇಕಿಲ್ಲ ಯಾವುದೂ ಶ್ರುತಿ ಲಯ

Friday, February 24, 2012

ಮನದ ಮೂಲೆಯಲ್ಲಿ ಬಚ್ಚಿಟ್ಟ ಹಂಬಲಗಳ ಬೆನ್ನಟ್ಟಿ
ಹೊರಟಿರುವೆ ನಾನು
ಜೊತೆಬರುವೆಯೇನು ನೀನು
ಬರುವೆಯಾದರೆ ಬಾ
ಇಬ್ಬರೂ ಜೊತೆ ಸಾಗೋಣ
ಬಚ್ಚಿಟ್ಟ ಹಂಬಲಕ್ಕೆ ನೀರೆರೆದು
ನಿನಗೆ ನಾನು ನನಗೆ ನೀನಾಗಿ
ಭವಿಷ್ಯದ ನವ ಕನಸೊಂದ ಹೆಣೆಯೋಣ
ನನ್ನುಸಿರು ನೀನಾಗಿ ನಿನ್ನೊಲವು ನಾನಾಗಿ
ಸಾಗೋಣ ದೂರ ದೂರ

Friday, February 17, 2012

ಎದೆಯಾಳದಲ್ಲಿ ಮೂಡಿದ ಈ ಭಾವಕ್ಕೆ
ಹೆಸರಿಡ ಹೊರಟ ನನಗೆ ನಾನಾರೆಂದು ತಿಳಿಯುತಿಲ್ಲ
ಆದರೂ ತಿಳಿಯುವ ಪ್ರಯತ್ನದಲ್ಲಿದ್ದೇನೆ
ಅದ್ಯಾವಾಗ ನಾ ನನ್ನ ಮನಸ ಅರಿವೆನೋ
ಅವನೂ ಹಾಗೆ ಅರ್ಥವಾಗದ ಕವಿತೆ
ಬಣ್ಣಿಸಲಾಗದ ಕಾಮನಬಿಲ್ಲು
ನನ್ನ ಮನಸಿನ ಚಿಪ್ಪಲ್ಲಿ ಮುತ್ತಾದ ಮಳೆಹನಿ
ಮನದ ಮಾಮರಕೆ ಇಂಚರವಾದ ಕೋಗಿಲೆ

Monday, January 30, 2012

ಭಾವಬೆಂಕಿಯಲ್ಲಿ ಬೇಯುವ ನೂರಾರು ನೆನಪುಗಳಿಗೆ
ಏನೆಂದು ಹೇಳಲಿ ತಿಳಿಯುತಿಲ್ಲ
ಹೇಗೆ ಸನಮಾಧಾನಿಸಲಿ ನಾನಿಲ್ಲಿ
ಮಾತ ಕೇಳದ ಪೆದ್ದು ಮನಸಿಗೆ
ಮುದ್ದು ಕನಸ ಹೊತ್ತ ನೆನಪಿಗೆ
ಕೇವಲ ಪ್ರಯತ್ನ ಮಾತ್ರ ಮಾಡಬಲ್ಲೆ
ಆದರೆ ಪರಿಹಾರ ಹೇಗೆ ನೀಡಲಿ

Sunday, January 22, 2012

ಹೇಳದೇ ಕೇಳದೇ ನೀ ನನ್ನ ಸೆಳೆದೆ
ನಾ ನಿನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದೇನೆ
ನನ್ನ ಮನಸು ಈಗ ನಿನ್ನದು
ನಿನ್ನೆಲ್ಲ ಕನಸು ನನ್ನದು
ಬಾ ಜೊತೆಯಾಗಿ ಭವಿಷ್ಯದ ನವ ಕನಸ ಹೆಣೆಯೋಣ
ನಿನಗೆ ನಾನು ನನಗೆ ನೀನು
ಜೊತೆಯಾಗಿರೆ ಬದುಕು ಹಾಲು ಜೇನು

Thursday, January 19, 2012

ಹೇಳು ನೀನು ಕೇಳುವೆ ನಾನು
ಮನಸಲ್ಲೇ ಮಾತಾಡೋಣಾ
ಕನಸ ಹಂಚೋಣ
ಭಾವಗಳ ಬೆಸೆಯೋಣಾ
ಹೊಸ ಜೀವನದ ಭವಿಶ್ಯಕ್ಕೆ ನಾಂದಿ ಹಾಡೋಣ
ಎಲ್ಲ ವಿರಸಗಳ ಮರೆತು

Wednesday, January 18, 2012

ಹೇಗೆಂದು ಬಣ್ಣಿಸಲಿ ಅಮ್ಮನ ಪ್ರೀತಿಯಾ
ಸಪ್ತ ವರ್ಣಗಳಿಗಿಂತ ಸುಂದರ ಅದು
ಸಪ್ತ ಸಾಗರಕಿಂತ ಆಳ ಅದು
ಯಾರೂ ಸಾಟಿಯಾಗರು ಹೆತ್ತಮ್ಮನಿಗೆ
ನವ ಮಾಸ ಹೊತ್ತು ಹೆತ್ತು ಸಲಹುವಳು
ಸಕಲ ನೋವ ಸಹಿಸುವಳು
ಕಂದನ ನಗುವಲ್ಲಿ ಜಗವನ್ನೇ ಮರೆಯುವಳು
ಪ್ರಣಾಮ ನಿನಗೆ ಓ ಜನನಿ
ಇಚ್ಛಿಸುವೆನಾನು ನಿನ್ನೊಡಲಲ್ಲಿ ಆಟವಾಡಲು ಎಳೆ ಮಗುವಾಗಿ
ಎಲ್ಲ ನೋವ ಮರೆತು
ಕ್ಶಮಿಸು ನನ್ನ ಮಾಡಿದ ತಪ್ಪುಗಳಿಗೆ
ಒಮೊಮ್ಮೆ ನೋಯಿಸಿದ್ದರೆ
ಹೇಳಿ ಹೋಗು ಕಾರಣವ
ನೀ ಹೋಗುವ ಮುನ್ನ
ಬರೆದು ಬಾ ಪತ್ರವ
ನೀ ಬರುವ ಮುನ್ನ
ಯಾಕೆಂದರೆ ನಾನು ನಿನ್ನ ನಂಬಿದ್ದೇನೆ
ನನಗಿಂತಲೂ ಹೆಚ್ಚಾಗಿ
ಮಾತಡದಿದ್ದರೂ ಚಿಂತೆಇಲ್ಲ
ಪ್ರೀತಿಮಾತಾಡಿ ವಂಚಿಸಬೇಡ
ನೋವಿನ ಚಿತೆಗೆ ಮತ್ತೆ ನೂಕಬೇಡ
ನನಗೆ ನೋವೇ ಮನೆ ಮಠ
ಹೇಳಿ ಹೋಗು ಕಾರಣವ
ನೀ ಹೋಗುವ ಮುನ್ನ
ಬರೆದು ಬಾ ಪತ್ರವ
ನೀ ಬರುವ ಮುನ್ನ
ಯಾಕೆಂದರೆ ನಾನು ನಿನ್ನ ನಂಬಿದ್ದೇನೆ
ನನಗಿಂತಲೂ ಹೆಚ್ಚಾಗಿ
ಮಾತಡದಿದ್ದರೂ ಚಿಂತೆಇಲ್ಲ
ಪ್ರೀತಿಮಾತಾಡಿ ವಂಚಿಸಬೇಡ
ನೋವಿನ ಚಿತೆಗೆ ಮತ್ತೆ ನೂಕಬೇಡ
ನನಗೆ ನೋವೇ ಮನೆ ಮಠ

Tuesday, January 17, 2012

ಶಾಂತ ಮನದಲ್ಲಿ ನೂರಾರು ಆವೇಗ ಕಿಚ್ಚೆಬ್ಬಿಸಿದೆ
ಭಾವನೆಯ ತಳಹದಿ ಹೊಕ್ಕು ನೆಲೆಸಿದೆ
ಎಂದೋ ಮರೆತ ನೋವು ನೆನಪಾಗಿದೆ
ಮನವಿಂದು ತಾನಾಗೆ ನೋವಿನ ಎಳೆಯ ಬಿಚ್ಚಿದೆ
ಪಳೆಯುಳಿಕೆಗೂ ಜೀವ ಬಂದಿದೆ
ಮತ್ತದೇ ಚರ್ಮ ಮಾಂಸ ರಕ್ತ ಮೂಡುತ್ತಿದೆ
ಅಕ್ಶಿಪಟಲ ಹರಿದೇ ಹೋಗುವಂತೆ ಮನಸು ಮರುಗುತ್ತಿದೆ
ಹೇಗೆ ಸಮಾಧನಿಸಲಿ ಒಂಟಿಯಾಗಿ ನಾನಿಲ್ಲಿ
ಆನಿಸುವ ಮೊದಲೆ ಮನದಲ್ಲಿ ಮೂಡಿದ
ಈ ಭಾವಕ್ಕೆ ಭರಿಸಲಾಗದ ಬೆಲೆ ನೀಡಿ
ಕನಸಲ್ಲಿ ಮೂಡಿದ ಚಿತ್ರಕ್ಕೆ ಮೂರ್ಥ ರೂಪ ನೀಡಿ
ನೆನಪಿನ ಪಳೆಯುಳಿಕೆಯ ಗಂಟಿಗೆ ಸೇರಿಸಿದ್ದೇನೆ
ಅರಿತೊ ಅರಿಯದೆಯೊ ಮೂಡಿದ ಚಿತ್ರಕ್ಕೆ ಯಾವ ಬಣ್ಣ ತುಂಬಲಿ ನಾನು

Monday, January 16, 2012

ಮನವಿಂದು ಹಾರಾಡಿದೆ ಹಕ್ಕಿಯಂತೆ
ಹಳೆಯ ನೊವ ಮರೆತು
ಕಲ್ಪನೆಯೊಂದು ಮೂಡಿದೆ ಕನಸಂತೆ
ನೆನಪುಗಳು ಹಾರಾಡಿವೆ ಗಾಳಿಗೆ ತೂರಿ
ಕಟ್ಟಿದ್ದೇನೆ ನಾನೊಂದು ಕನಸಿನ ಸೌಧವ
ಹೊಸ ಭಾವನೆಯ ಇಟ್ಟಿಗೆಯಲ್ಲಿ
ನಂಬಿಕೆಯೆಂಬ ಪಾಯ ಹಾಕಿ

Thursday, January 12, 2012

ಭಾರವಾದ ಮನಸು ಹೊತ್ತು
ಭವಿಷ್ಯದ ನವ ಕನಸಿಗೆ ಬೆಂಕಿ ಹಚ್ಚಿ
ಭಾವನೆಗಳೆಲ್ಲವ ಮೂಟೆ ಕಟ್ಟಿ
ಅಟ್ಟದಮೇಲೆ ಬಚ್ಚಿಟ್ಟಿದ್ದೇನೆ
ಎಂದಾದರೂ ಬೇಕಾಗಬಹುದೆಂದು
ಮುಂದೊಮ್ಮೆ ಹೊಸ ಕನಸ ಹೆಣಿಯಲೆಂದು

Wednesday, January 11, 2012

ನಾನೇನು ಮಾಡಲಿ ಇಂದು
ನೆನಪಿನ ಸುರುಳಿ ಮತ್ತೆ ಬಿಚ್ಚಿದೆ
ಮರೆತೆನೆಂದರೊ ಮರೆಯದ ಮೌನದ ಹಾಡು ಮತ್ತೆ ಮತ್ತೆ ನೆನಪಾಗಿದೆ
ಏಕೊ ಗೊತ್ತಿಲ್ಲ ನಾನು ನಾನಗಿಲ್ಲ
ಕಾಣೆಯಾಗುತ್ತಿದ್ದೇನೆ ತಂತಾನೆ
ನೆನಪುಗಳ ಮಳೆಯಲ್ಲಿ ತೊಯ್ದು
ಕನಸುಗಳ ಕಡಲಲ್ಲಿ ಮಿಂದು

Tuesday, January 10, 2012

ಬೇಸರದ ಸಂಜೆಯಲಿ ಹೊತ್ತೇ ಕಳೆಯುತಿಲ್ಲ
ಭಾವನೆಯ ಪೆಟ್ಟಿಗೆಗೂ ಬೀಗ ಹಾಕಿರುವೆ ನಾನು
ಹೇಗೆ ಸಮಧಾನಿಸಲಿ ಮನಸ
ಶಬ್ಧಗಳು ಸಿಗುತಿಲ್ಲ
ಆದರು ಪ್ರಯತ್ನಿಸುತ್ತಿದ್ದೇನೆ
ಸಮಾಧಾನಿಸುತ್ತಿದ್ದೇನೆ ತಾಯಿ ಮಗುವ ಸಮಾಧಾನಿಸಿದಂತೆ
ನನಗೆ ನಾನೇ
ಸ್ವಯಂ ಸಮಧಾನ ಅಪರಾಧವಲ್ಲ
ಸಣ್ಣ ಹುಲ್ಲು ಕಡ್ಡಿಯಾದರೂ ಚಿಗುರೀತು ಆಶಾವಾದದ ಕಿಡಿಗೆ

Sunday, January 8, 2012

ಪುಟ್ಟ ಕಂದನ ಮೊಗದಲ್ಲಿ ಅದೆಂತಹ ಚೆಲುವು
ಆಗಸದ ಚಂದ್ರನನ್ನೂ ನಾಚಿಸುವುದು
ಪುಟ್ಟ ಕಾಲ್ಗಳ ಗೆಜ್ಜೆ ನಾದಕ್ಕೆ ತಲೆದೂಗಬೇಕು ನಾವುಗಳು
ಆ ಮೊಗದಲ್ಲಿ ದ್ವೇಷವಿಲ್ಲ,ಅಸೂಯೆ ಇಲ್ಲ
ಬರಿಯ ಮುಗ್ಧತೆ ಪ್ರಶಾಂತತೆ
ಜಗತ್ತಿನ ಪಾಪಗಳ ಅರಿವಿಲ್ಲ
ಅದರ ಲೋಕದಲ್ಲಿ ಅಮ್ಮ ಒಬ್ಬಳೇ
ನಾವೂ ಇದ್ದೇವೆ ಪಾಪಕೂಪಲ್ಲಿ
ದ್ವೇಷ ಅಸೂಯೆಯ ಲೊಕದಲ್ಲಿ

Friday, January 6, 2012

ಮುಂಜಾನೆ ಮಂಜಲ್ಲಿ ಚುಮುಚುಮು ಚಳಿಯಲಿ
ಶುಕ ಪಿಕಗಳ ಇಂಚರದಲ್ಲಿ
ವಸುಂಧರೆ ಹೊಸ ಸೀರೆ ಉಟ್ಟು
ನವ ವಧುವಿನಂತೆ ಸಿಂಗರಿಸಿಕೊಂಡಿದ್ದಾಳೆ
ಯಾವ ಮದುಮಗಳಿಗೂ ಕಡಿಮೆ ಇಲ್ಲ
ಇಲ್ಲಿ ಆಗಸವೇ ಚಪ್ಪರ ಮದುವೆಮನೆಗೆ
ಹಕ್ಕಿ ಪಕ್ಕಿಗಳೇ ಬಂಧು ಬಳಗ
ಹಣ್ಣು ಹಂಪಲೆ ಸಿಹಿ ತಿನಿಸುಗಳು
ಸಿಹಿ ಜೇನೇ ಪಾನೀಯಗಳು
ಬನ್ನಿ ಸವಿಯೋಣ ಮನುಜ ಮತವೆಲ್ಲ ಒಂದಾಗಿ
ಮೇಲು ಕೀಳೆಂಬ ಸಂಕೋಲೆಯ ಕಳಚಿ
ಹೇಳದೆ ಕೇಳದೆ ಮನಸಿನ ಕದ ತಟ್ಟಿದ
ಆ ನೂರು ಭಾವಕ್ಕೆ ನಾ ಎನೆನ್ದು ಹೆಸರಿಡಲಿ
ಮನಸೀಗ ಮಾತ ಕೇಳುತಿಲ್ಲ
ಅದಕ್ಕೆ ನೆಮ್ಮದಿ ಬೆಕನ್ತೆ
ಅದೆಲ್ಲಿನ್ದ ನಾ ಕಡ ತರಲಿ
ಅದೇನು ಮಾರುಕಟ್ಟೆಯ ಸಗಟೇ

Thursday, January 5, 2012

ಮುಳುಗಿದ್ದೇನೆ ಅದಾವುದೋ ಲೋಕದಲ್ಲಿ
ಭಾವನೆಗಳ ತೊಳಲಾಟದಲ್ಲಿ
ಅಪ್ಯಾಯಮಾನವಾದ ನೆನಪುಗಳ ಸರಣಿಯೊಳಗೆ ಸಿಲುಕಿ
ಹಕ್ಕಿಯನ್ತೆ ಹಾರಲು ಮನ ತವಕಿಸುತಿದೆ
ಆದರೆ ಮನಸಿಗೆ ರೆಕ್ಕೆ ಪುಕ್ಕ ಇಲ್ಲವಲ್ಲ
ಕಳೆದುಹೋದ ಮನಸಿನ ಹುಡುಕಾಟದಲ್ಲಿ ನಾನು

Wednesday, January 4, 2012

ನಿನ್ನಲ್ಲೆ ಹುದುಗಿದೆ ಜೀವ
ನೀ ಅದವಾಗ ಅರಿವೆ ನನ್ನ ಭಾವನೆಗಳ ತೊಳಲಾಟವನ್ನು
ಕಾರಣ ನಾ ಕೇಳಿಲ್ಲ ನೀನೂ ಹೇಳಿಲ್ಲ
ತಿಳಿದೊ ತಿಳಿಯದೆಯೊ ನಾನು ಅಸುನೀಗಿದ್ದೇನೆ
ಕಳೆದುಹೋದ ಭಾವನೆಗಳ ಹುಡುಕಾಟದಲ್ಲಿ
ನಿನ್ನಲ್ಲೆ ಹುದುಗಿದೆ ಜೀವ
ನೀ ಅದವಾಗ ಅರಿವೆ ನನ್ನ ಭಾವನೆಗಳ ತೊಳಲಾಟವನ್ನು
ಕಾರಣ ನಾ ಕೇಳಿಲ್ಲ ನೀನೂ ಹೇಳಿಲ್ಲ
ತಿಳಿದೊ ತಿಳಿಯದೆಯೊ ನಾನು ಅಸುನೀಗಿದ್ದೇನೆ
ಕಳೆದುಹೋದ ಭಾವನೆಗಳ ಹುಡುಕಾಟದಲ್ಲಿ
ನಿನ್ನಲ್ಲೆ ಹುದುಗಿದೆ ಜೀವ
ನೀ ಅದವಾಗ ಅರಿವೆ ನನ್ನ ಭಾವನೆಗಳ ತೊಳಲಾಟವನ್ನು
ಕಾರಣ ನಾ ಕೇಳಿಲ್ಲ ನೀನೂ ಹೇಳಿಲ್ಲ
ತಿಳಿದೊ ತಿಳಿಯದೆಯೊ ನಾನು ಅಸುನೀಗಿದ್ದೇನೆ
ಕಳೆದುಹೋದ ಭಾವನೆಗಳ ಹುಡುಕಾಟದಲ್ಲಿ
ಮರೆಯದ ಹಾಡು:

ಮರೆಯದ ಹಾಡು ಮನಸಲ್ಲಿ
ಕಾಣದ ಕವಿತೆ ಕನಸಲ್ಲಿ
ಮನದಾಳದಲಿ ಮೂಡಿದ ಕನಸು
ಸಾವಿರಾರು ಭಾವಕ್ಕೆ ಸಾಕ್ಶಿ ಆಗಿದೆ
ಹೆಳದೆ ಕೆಳದೆ ಮೂಡಿದ
ಕನಸಿಗೆ ಹೊಣೆ ಯಾರು?
ನಾನಾ,ಅವನಾ.
ಮರೆಯದ ಮೌನದಲಿ ಅವುಡುಗಛ್ಹಿದ ನೂರಾರು ಪಳೆಯುಳಿಕೆಗಳು
ಮೂಕ ಪಕ್ಶಿಯ ಮೌನ ರೊಧನಕೆ ಸಾಕ್ಶಿಯಾಗಿವೆ ನೆನಪುಗಳು
ತಿಳಿದೊ ತಿಳಿಯದೆಯೊ ನಾನು ಸಮಾಧಿಯಾಗಿದ್ದೆನೆ
ಭಾವನೆಗಳ ತೊಳಲಾಟದ ತೆಕ್ಕೆಯಲ್ಲಿ.

Tuesday, January 3, 2012

ಮರೆಯದ ಹಾಡು:

ಮರೆಯದ ಹಾಡು ಮನಸಲ್ಲಿ
ಕಾಣದ ಕವಿತೆ ಕನಸಲ್ಲಿ
ಮನದಾಳದಲಿ ಮೂಡಿದ ಕನಸು
ಸಾವಿರಾರು ಭಾವಕ್ಕೆ ಸಾಕ್ಶಿ ಆಗಿದೆ
ಹೆಳದೆ ಕೆಳದೆ ಮೂಡಿದ
ಕನಸಿಗೆ ಹೊಣೆ ಯಾರು?
ನಾನಾ,ಅವನಾ.