Thursday, May 8, 2014

ದಿನಾಂಕ ೭/೫/೨೦೧೪ ರಂದು ವಿಜಯ ಕರ್ನಾಟಕದಲ್ಲಿ ಪ್ರಕಟಿತ

Monday, May 5, 2014

ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನಗಳು




Friday, February 7, 2014

ಬರೆಯುವೆನೊಂದು ಕವಿತೆಯ ನಿನಗಾಗಿ
ನಿನ್ನ ಪ್ರೀತಿ ತುಂಬಿದ ಮಾತಿಗಾಗಿ
ಓ ಗೆಳೆಯಾ,ಕಾತರಿಸುತ್ತಿದ್ದೇನೆ ನಾನಿಲ್ಲಿ.ನಿನ್ನ ಬರುವಿಕೆಗಾಗಿ
ನಿನ್ನೊಲವ ಧಾರೆಯ ಸಿಂಚನಕ್ಕಾಗಿ
ಅದೆಂದು ಬರುವೆ ನೀನು ನನ್ನವನಾಗಿ
ನನ್ನೊಲುಮೆಯ ಕಣ್ಮಣಿಯಾಗಿ
ನನ್ನೊಲವ ಮುಂಗಾರು ಮಳೆಯಾಗಿ..........

Thursday, August 22, 2013

ತುಂಬಾ ದಿನಗಳಿಂದ ಬ್ಲಾಗ್ ನಲ್ಲಿ ನಾನೂ ಬರೀಬೇಕು ಅಂತಾ ಅಂದುಕೊಂಡೇ ಇದ್ದೆ.ಬ್ಲಾಗ್ ರಚಿಸಿ  ೨ ವರ್ಷವಾದ್ರೂ ಸಹಾ ಕವನಗಳ ವಿನಹಃ ಇನ್ನೆನೂ ಬರೆಯಲಾಗಲಿಲ್ಲ.

ಹೀಗೆ ಕೂತಿದ್ದಾಗ ಯಾಕೋ ಕಾಲೇಜಿನ ದಿನಗಳು ನೆನಪಾದವು.ಬಿ ಎಸ್ ಸಿ ಕೊನೆಯ ವರ್ಷದಲ್ಲಿದಾಗ ನಾವು ಮಾಡಿದ ಚೇಷ್ಟೆಗಳಿಗೆ ಲೆಕ್ಕನೇ ಇಲ್ಲ.ಕ್ಲಾಸ್ನಲ್ಲೇ ಕೂತು ಕವನ ಗೀಚೊ ಹುಡುಗಿ ನಾನು.ಗಣಿತದ ಕ್ಲಾಸ್ ನನ್ನ ಕವನಗಳ ಹುಟ್ಟಿಗೆ ಕಾರಣ ಅಂದರೆ ತಪ್ಪಾಗಲ್ಲ.ನನ್ನ  ಅಕ್ಕ ಪಕ್ಕದಲ್ಲಿ ಕೂತಿದ್ದ ಹುಡುಗೀರು ತಲೆ ಕೆಡಿಸಿಕೊಂಡು ಲೆಕ್ಕ  ಬಿಡಿಸ್ತಾ ಇದ್ರೆ ನಾನು ಮಾತ್ರ ಇದ್ಯಾವ್ದೂ ನಂಗೆ ಸಂಬಂಧವೇ ಇಲ್ಲ ಅನ್ನೊ ತರ ಕವಿತೆ ಗೀಚುತ್ತ ಕೂತು ಬಿಡುತ್ತಿದ್ದೆ.ಇನ್ನು ಲ್ಯಾಬ್ ನಲ್ಲಂತೂ ಮಾವಿನಾಕಾಯಿ ತಿನ್ನುತ್ತ ಕೂರುತ್ತಿದ್ದೆ.ಪರೀಕ್ಷೆ ಬಂದಾಗ ಮಾತ್ರ ಓದುತ್ತಿದ್ದೆ.ನನ್ನ ಆಪ್ತ ಗೆಳತಿ ಶ್ವೇತ ಬೇರೆಯದೇ ಕಾಂಬಿನೇಶನ್ ಆದ್ರೂ ಅವಳೊಂದಿಗೆ ಸುತ್ತುತ್ತಿದ್ದೆ. ಕಾಲೇಜು ಮುಗಿಸಿ ಪೇಟೆ ಸುತ್ತಲು ಹೊರಟರೆ ನಮ್ಮಿಬ್ಬರನ್ನು ಮೀರಿಸುವರು ಯಾರೂ ಇರಲಿಲ್ಲ.ಇದೀ ಶಿರಸಿ ನಗರವನ್ನು ಒಂದು ಬಾರಿ ಸುತ್ತುತ್ತಿದ್ದೆವು. ಒಮ್ಮೆ ಪರೀಕ್ಷೆಯ ಹಿಂದಿನ ದಿನ ಕೂಡ ಓದದೇ ರೂಮಲ್ಲಿ ಕೂತು ಬಾಳೆಕಾಯಿ ಚಿಪ್ಸ್ ಮಾಡಿ ಸಾಹಸ ಮಾಡಿದ್ವಿ.ಚಿಪ್ಸ್ ಎನೋ ಚೆನ್ನಾಗಿತ್ತು. ಆದರೆ ಪರೀಕ್ಷೆ ಮಾತ್ರ ಹಳ್ಳ ಹಿಡಿದಿತ್ತು.ಪಾಸಾಗಿದ್ದೇ ಪುಣ್ಯವಾಗಿತ್ತು.

ಮರಳಿ ಮರಳಿ ಬರಲು ನೀನು 
ಮತ್ತೆ ಮತ್ತೆ ಮನಸೊಳಗೆ
ಇತ್ತ ನಾನು ಎತ್ತ ನೀನು ಕಾಣದಾದೆ ನಾನು
ಮತ್ತೆ ಮತ್ತೆ ಬರಲು ನೀನು ಮನಸಲ್ಲಿ
ಮನಸಾರೆ ನಾನಾದೆ ನಿನ್ನ ಮನದನ್ನೆ

Tuesday, July 9, 2013

ಒಮ್ಮೆ ಇಣುಕು ನನ್ನ ಮನಸಿನಾಳಕ್ಕೆ
ಅದೆಷ್ಟೋ ಭಾವಗಳು ತೋರುವುದು\
ನೂರಾರು ಕನಸುಗಳು ಹುಟ್ಟುವುದು
ಆ ಕನಸಲೆಲ್ಲ ನೀನೇ
ನಿಜ ಹೇಳಲೇನು ಗೆಳೆಯಾ
ಯಾಕೋ ನನ್ನೊಳು ನಾನಿಲ್ಲ
ನಾನಾರೆಂಬುದೇ ಮರೆತಂತಿದೆ
ನಿನ್ನವಳೆಂಬ ಹಣೆಪಟ್ಟಿ ಹೊತ್ತು ಬೀಗುತ್ತಿದ್ದೇನೆ